  ಮೂಲದೊದನೆ ಪರಿಶೀಲಿಸಿ

ಐಸೊಪ್ರೊಪೈಲ್ ಅಸಿಟೇಟ್: ಸುವಾಸನೆ ಬೀರುವ ಬಣ್ಣವಿಲ್ಲದ ದ್ರವವಸ್ತು. ಅಣುಸೂತ್ರ ಅ5ಊ10ಔ2. ರಚನಾಸೂತ್ರ
00 ಸೆಂ. ಉಷ್ಣತೆಯಲ್ಲಿ ಸಾಂದ್ರತೆ 0.9166. ಕುದಿಯುವ ಬಿಂದು 88.20 ಸೆಂ. ನೀರಿನಲ್ಲಿ ಅದ್ರಾವ್ಯ. ಅನೇಕ ಸಾವಯವ (ಆಗಾರ್ಯ್‌ನಿಕ್) ಲೀನಕಾರಿಗಳೊಡನೆ ಬೆರೆಯುತ್ತದೆ. ಪ್ರೊಪೈಲೀನನ್ನು ಬಿಸಿಯಾದ ಅಸಿಟಿಕ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣದ ಮೂಲಕ ಹಾಯಿಸಿದಾಗ ಅಥವಾ ಆಮ್ಲ ಮಿಶ್ರಣದೊಡನೆ ಐಸೊಪ್ರೊಪೈಲ್ ಆಲ್ಕೊಹಾಲನ್ನು ಕಾಯಿಸಿದಾಗ ಈ ಎಸ್ಟರು ಉತ್ಪತ್ತಿಯಾಗುತ್ತದೆ. ಐಸೊಪ್ರೊಪೈಲ್ ಆಲ್ಕೊಹಾಲಿನೊಡನೆ (52.5%) ನಿಯತ ಕುದಿ ಮಿಶ್ರಣ (ಕುದಿಯುವ ಬಿಂದು 80.10ಸೆಂ.) ಉಂಟುಮಾಡುವುದು. ಬಿಸಿ ಮಾಡಿದ ಕ್ಷಾರಗಳ ಸಂಪರ್ಕದಲ್ಲಿ ವಿಭಜನೆ ಹೊಂದಿ ಐಸೊಪ್ರೊಪೈಲ್ ಆಲ್ಕೊಹಾಲ್ ಮತ್ತು ಅಸಿಟೇಟುಗಳನ್ನು ಕೊಡುವುದು. ಸೆಲ್ಯುಲೋಸ್ ನೈಟ್ರೇಟ್ ಮತ್ತು ಬಹು ಪಾಲು ಅಂಟುಗಳು ಇದರಲ್ಲಿ ಲೀನವಾಗುವುವು, ಆದರೆ ಸೆಲ್ಯೂಲೋಸ್ ಅಸಿಟೇಟ್ ಮಾತ್ರ ಲೀನವಾಗುವುದಿಲ್ಲ.                                                   (ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ